ಹತ್ತು ಜನರಿಂದ ಒಂದೊಂದು ತುತ್ತು….. ಇದು ನನ್ನ ಬಾಲ್ಯದ ಕನಸು….

ಅದು ಸಾವಿರದಾ ಒಂಬೈನೂರ ತೊಂಬತ್ತೆರಡನೆ ಇಸವಿ (1992) ಅಂದರೆ ಸರಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ! ನಾನಾಗ ನಾಲ್ಕನೇ ತರಗತಿ ಓದುತ್ತಿದ್ದೆ ಮನೆಯಿಂದ ಶಾಲೆಗೆ 5 ಕಿ ಮೀ ಪಯಣ, ಈಗಿನಂತೆ ಬಸ್ಸಿರಲಿಲ್ಲಾ, ಆಟೋ ಇರಲಿಲ್ಲ, ಆಟೋ ಇದ್ದರೂ ಬಡವರ ಕೈಗೆಟುಕುವಂತಿರಲಿಲ್ಲ ಹಾಗೂ ಇತರೆ ವಾಹನವಿಲ್ಲ. ನಡೆದುಕೊಂಡೇ ಶಾಲೆಗೆ ಹೋಗಬೇಕು,  ನಡೆದುಕೊಂಡೆ ಮನೆಗೆ ವಾಪಸ್ ಬರಬೇಕು. ಅದೂ ಬರಿಗಾಲಿನಲ್ಲಿ! ಬಿಸಿಲುಗಾಲದಲ್ಲಿ ಪ್ರತಿ ಹೆಜ್ಜೆ ಇಡಬೇಕಾದರೆ ಕಣ್ಣು ತುಂಬಿ ಬರುತ್ತಿತ್ತು….

ಆ ದಿನಗಳಲ್ಲಿ ಒಂದು ದಿನ ಎಂದಿನ ಶನಿವಾರದಂತೆ ಅರ್ಧ ದಿನದ ತರಗತಿ ಮುಗಿಸಿಕೊಂಡು ಬಿರು ಬಿಸಿಲಿನಲ್ಲಿ ನಡೆದು ಸಾಗುವಾಗ ಅರ್ಧ ದಾರಿ ಕ್ರಮಿಸಲಷ್ಟೇ ಸಾಧ್ಯವಾದದ್ದು, ಕಾಲುಗಳು ಸುಟ್ಟು ಹೆಜ್ಜೆ ಇಡಲಾಗದೆ ಕ್ಷಣ ಕ್ಷಣಕ್ಕೂ ನರಕ ಯಾತನೆಯ ಅನುಭವಿಸಿದಂತಾಗುತಿತ್ತು ಹಾಗೂ ಹೀಗೂ ಮಾಡಿ ಮನೆ ಸೇರಿದ್ದು ಆಯಿತು……

ಆ ದಿನ ಹೆಜ್ಜೆ ಇಡಲಾಗದೆ ಸುಸ್ತಾಗಿ ಕುಳಿತಾಗ ಗಟ್ಟಿಯಾಗಿ ಮಾಡಿದ ಒಂದು ನಿರ್ಧಾರ ಅಂದರೆ ಸಾಧ್ಯವಾದರೆ ಮುಂದೊಂದು ದಿನ ನಾನು ದೊಡ್ಡವನಾದ ಮೇಲೆ ನನ್ನಂತೆ ಬರಿಗಾಲಲ್ಲಿ ನಡೆವ ಒಂದು ಮಗುವಿಗಾದರೂ ಚಪ್ಪಲಿ ಕೊಡಿಸಬೇಕು……….. ಅಲ್ಲಿಂದ ಅದು ಪ್ರತಿ ನಿತ್ಯದ ಕನಸೇ ಆಗಿ ಹೋಯಿತು ಆ ಕನಸಲ್ಲಿ ನನ್ನ ನೋವು ಮರೆತೇ ಹೋಗಿತ್ತು………..!!

ಬರೀ ಪಾದರಕ್ಷೆಯ ಸಮಸ್ಯೆ ಮಾತ್ರವಲ್ಲ ನಮ್ಮ ಬದುಕು ಅದನ್ನೂ ಮೀರಿದ ಹತ್ತು ಹಲವು ನೋವುಗಳಿದ್ದವು ಅವುಗಳಲ್ಲಿ ಕೆಲವು ಇಂದಿಗೂ ಮನದಲ್ಲಿ ಜೀವಂತ, ಇತರ ನಮಗಿಂತ ಸಿರಿವಂತರ ಮಕ್ಕಳು ಓದಿ ಬರೆದು ಮುಗಿಸಿದ ಪುಸ್ತಕದಲ್ಲಿ ಉಳಿದ ಹಾಳೆಗಳನ್ನು ಪಡೆದು ಅದನ್ನು ಒಟ್ಟುಗೂಡಿಸಿ ಅದಕ್ಕೆ ದಾರದಿಂದ ಹೊಲಿಗೆ ಹಾಕಿ ಪುಸ್ತಕದ ರೀತಿ ಮಾಡಿ ನೋಟ್ಸ್‌ಗಳನ್ನು ಪೂರ್ಣಗೊಳಿಸಿದ ಹತ್ತಾರು ಉದಾಹರಣೆಗಳು ಮನದಲ್ಲಿ ಹಚ್ಚ ಹಸಿರಾಗಿದ್ದು, ಇಂದಿಗೂ ಕಣ್ಣಲ್ಲಿ ನೀರು ತರಿಸುತ್ತವೆ.

ಹರಿದ ಅಂಗಿಯ ಉಟ್ಟು, ಕೊಳಕು ಚಡ್ಡಿಯ ತೊಟ್ಟು, ದಾರಿಯಲಿ ನಡೆವಾಗ ಹಣವಂತರ ಮಕ್ಕಳು ಅಣಕಿಸಿದ್ದು ಇನ್ನೂ ಹಸಿ ಹಸಿಯಾಗಿಯೇ ನೆನಪಿದೆ.
ಇದೆಲ್ಲಾ ನನ್ನ ಬದುಕಿನ ಪುಟಗಳಲಿ ಅಚ್ಚಳಿಯದೆ ಉಳಿದ ನೆನಪುಗಳ ಕಲಾಕೃತಿಗಳು ಅಂದರೂ ತಪ್ಪಲ್ಲ.

……………………………………………………………………………………………………………

ಇಪ್ಪತ್ತು ವರ್ಷಗಳ ನಂತರ…..!

…………………ಮುಂದುವರೆಯುತ್ತದೆ

Advertisements

3 thoughts on “ಹತ್ತು ಜನರಿಂದ ಒಂದೊಂದು ತುತ್ತು….. ಇದು ನನ್ನ ಬಾಲ್ಯದ ಕನಸು….

  1. ಬಾಲ್ಯದ ದಿನಗಳಲ್ಲಿ ಬಿತ್ತಿದ್ದ ಕನಸುಗಳು ಯೌವನದಲ್ಲಿ ಫಲ ಕೊಡಲೇ ಬೇಕು. ಯಾಕೆಂದರೆ ಬಾಲ್ಯದ ಕನಸುಗಳಿಗೆ ಬರಿ ನೀರಲ್ಲ.. ಕಣ್ಣೀರ ಕಂಬನಿ.. ಆನಂದ ಭಾಷ್ಪ ಎಲ್ಲವೂ ಸೇರಿರುತ್ತದೆ. ಸುಂದರ ಮನದ ನೀವು ಸುಂದರ ಅಕ್ಷರಗಳ ಲೋಕಕ್ಕೆ ಪಾದ ವಿಟ್ಟಿರುವುದು ಸಂತಸದ ಸಂಗತಿ. ತಲಕಾವೇರಿಯಲ್ಲಿ ಹುಟ್ಟುವ ಒಂದು ಸಣ್ಣ ಝರಿ ಮೈದುಂಬಿ ಹರಿಯುವಂತೆ ಹರಿಯಲಿ ನಿಮ್ಮ ಮಾತುಗಳು. ಸೂಪರ್ ಸತೀಶ್

  2. ತುಂಬಾ ಚೆನ್ನಾಗಿದೆ ಗೆಳೆಯ ನಿಮ್ಮ ಬರಹ ನಾನು ಕೂಡ ಕಷ್ಟ ಪಟ್ಟಿದಿನಿ ಕಾಲಿಗೆ ಸ್ಲಿಪ್ಪರ್ ಇಲ್ಲದೆ ನಡೆದಿದಿನಿ ಆದರೆ ನಿಮ್ಮ ಹಾಗೆ ನಾನು ದೊಡ್ಡವನಾದ ಮೇಲೆ ನನ್ನಂತೆ ಬರಿಗಾಲಲ್ಲಿ ನಡೆವ ಒಂದು ಮಗುವಿಗಾದರೂ ಚಪ್ಪಲಿ ಕೊಡಿಸಬೇಕು… ಎನ್ನುವ ಆಶಯವೇ ನನ್ನಲ್ಲಿ ಮೊಡಲಿಲ್ಲ ನಮ್ಮಿಬರಿಗೆ ಇರುವ ವ್ಯತ್ಯಾಸ ಇದೆ ಹಾಟ್ಸ್ ಆಫ್ 2 u 🙂 DOM

  3. ಮೆಚ್ಚಿನ ಗೆಳೆಯ ಸತೀಶ್… ಬ್ಲಾಗ್ ಲೋಕಕ್ಕೆ ಸ್ವಾಗತ ಸುಸ್ವಾಗತ! ನಿಮ್ಮ ಬರವಣಿಗೆಗೆಳನ್ನು ಓದುವ ಭಾಗ್ಯ ಇನ್ನು ನಮ್ಮದು. ನಮಗೆಲ್ಲಾ ಈಗಾಗಲೇ ತಿಳಿದಿರುವಂತೆ ನಿಮ್ಮ ಹೃದಯ ದೊಡ್ಡದು. ಅದರಲ್ಲಿ ಬಹಳಷ್ಟು ಹಳೆಯ ಕಹಿ ನೆನಪುಗಳು ತುಂಬಿವೆ ಎಂದೂ ತಿಳಿದಿತ್ತು. ಆದರೆ ಅವುಗಳ ನಿಜ ಸ್ವರೂಪ ನೋಡಿರಲಿಲ್ಲ… ಈ ಬ್ಲಾಗ್ ಬರಹದ ಮೂಲಕ ನಿಮ್ಮ ಅಂತರಂಗದಿಂದ ಹರಿದು ಬಂದ ಸಾಲುಗಳು ಮನಸ್ಸಿಗೆ ತಟ್ಟಿತು. ನಿಮ್ಮ ಬಗ್ಗೆ ನಮ್ಮ ಅಭಿಮಾನ ಇಮ್ಮಡಿಯಾಯಿತು… ಹೀಗೆ ಸಾಗುತಿರಲಿ ನಿಮ್ಮ ಕನಸಿನ ಸಾಧನೆಯ ಹಾದಿ… ನಾವೆಲ್ಲರೂ ನಿಮ್ಮನ್ನು ಹಿಂಬಾಲಿಸುತ್ತೇವೆ… ನಿಮಗೆ ಸಾಥ್ ನೀಡುತ್ತೇವೆ. ಶುಭವಾಗಲಿ!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s