ನನ್ನ ಆತ್ಮಶಕ್ತಿಯನ್ನು ಹೊರತೆಗೆದದ್ದು…… ಶ್ರೀ ಸಾಯಿ ಕಾಮಧೇನು ಫೌಂಡೇಶನ್

ಮುಂದುವರೆಯುತ್ತಾ ಹೋದಂತೆ ಜೊತೆ ಜೊತೆಗೆ ಹತ್ತಾರು ತಂಡಗಳು ಹುಟ್ಟಿಕೊಂಡವು, ಒಂದೊಂದೂ ಒಂದೊಂದು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವು ನೀಡುವ ಉದ್ದೇಶವನ್ನೇ ಬೆಳೆಸಿಕೊಂಡವು.
ಇಂತಹ ತಂಡಗಳಲ್ಲಿ ನನ್ನ ಗಮನ ಸೆಳೆದೆ ಮತ್ತೊಂದು ತಂಡವೆಂದರೆ ಅದು ಶ್ರೀ ಸಾಯಿ ಕಾಮಧೇನು ಫೌಂಡೇಶನ್, ಈ ತಂಡದ ನಿರ್ವಾಹಕನಾಗಿ ಜೊತೆಗೂಡಿ  ತಂಡದ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ನನ್ನ ಬಾಲ್ಯದ ಕನಸಿಗೆ ಮತ್ತಷ್ಟು ರಂಗು ಬಂದಿತು.

Image

ಅದೊಂದು ಸಮಾನ ಮನಸ್ಕರ ಪುಟ್ಟ ತಂಡ ಸಂತಸಗಳ ಹಂಚುತ್ತಾ ನೋವುಗಳನ್ನು ಮರೆಸುತ್ತಾ, ಸದಾ ಉತ್ಸಾಹದ ಚಿಲುಮೆಯ ತಂಡ.  ಸಮಯ ಸಿಕ್ಕಾಗಲೆಲ್ಲಾ ಒಂದು ಕಡೆ ಭೇಟಿಯಾಗಿ ವಿಚಾರ ವಿನಿಮಯಗಳನ್ನು ಸಂಗ್ರಹಿಸಿ ಎಲ್ಲರೂ ಚರ್ಚಿಸಿ  ಕುಶಿ ಕುಶಿ ವಿಚಾರಗಳನ್ನು ಹಂಚಿಕೊಂಡು ಸದಾ ನಗು ನಗುತ್ತಾ ಸಾಗುತ್ತಿದ್ದ  ತಂಡವೇ ಈ ಕಾಮಧೇನು ಫೌಂಡೇಶನ್.

ಒಂದು ಸುಂದರ ಆಶಯವನ್ನು ಹೊತ್ತು ನೂರಾರು ಬಡ ಮಕ್ಕಳ  ಆಸೆಗಳಿಗೆ ನೆರವಾಗುವ,  ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಬೇಕಾಗುವ ವಿವಿಧ ಸವಲತ್ತುಗಳ ಬಗ್ಗೆ ಗಮನ ಹರಿಸಿ, ಮಕ್ಕಳಲ್ಲಿ ತಾಂತ್ರಿಕವಾಗಿ ಮತ್ತು ಬೌದ್ದಿಕ  ಜ್ಞಾನವನ್ನು ವೃದ್ಧಿಸುವ ಆಶಯ ಈ ತಂಡದ್ದು……  ಈ SSKF ತಂಡವು ಕೂಡ ನನ್ನ ಬದುಕಿನ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ…. ತುಂಬು ಮನದ ವಂದನೆಗಳು SSKF ಟೀಮ್……..

ಈ ತಂಡದ ಜೊತೆಗೂಡಿ 2011ರಲ್ಲಿ ಮಲ್ಲಿಗೆರೆ ಶಾಲೆಯ ಮಕ್ಕಳಿಗೆ ಪಾದರಕ್ಷೆ, ನೋಟ್ ಪುಸ್ತಕ,  ಶಭ್ಧ ಮಂಜರಿಗಳನ್ನು ವಿತರಿಸುವ ಮೂಲಕ ನೂರಾರು ಮಕ್ಕಳ ಸಂತಸಕ್ಕೆ ಕಾರಣವಾಯಿತು ಈ ತಂಡ………….

ಬೆಳೆದು ಬಂದ ಬಂದ ದಾರಿಯಲ್ಲಿ
ನೆರಳು ನೀಡಿದಂತ ಮರಗಳನು
ಮರೆಯುವವ ಮರೆಗುಳಿ ನಾನಲ್ಲ…..

ಎಲ್ಲವನ್ನೂ ಮನದಿ ನೆನೆದು
ಎಲ್ಲರಿಗೂ ಮನದಿ ನಮಿಸಿ
ಧನ್ಯತೆಯ ಹೊಂದುವ ನಾ….

ಬದುಕ ಪಯಣದಲ್ಲಿ ನೂರು ಆಶಾಭಾವಗಳನ್ನು ಮೂಡಿಸಿದ ಸ್ನೇಹಲೋಕ ಮತ್ತು ಶ್ರೀ ಸಾಯಿ ಕಾಮಧೇನು ಫೌಂಡೇಶನ್  ಈ ಎರಡು ತಂಡಗಳಿಗೂ ನನ್ನ ಮನದ ನೂರು ನಮನ…………..

ಮುಂದಿನ ವಾರ……….  ಹತ್ತು ಜನರಿಂದ ಒಂದೊಂದು ತುತ್ತು…………….

Advertisements

ನನ್ನ ಬದುಕ ದಿಕ್ಕನ್ನು ಬದಲಿಸಿದ್ದು ನನ್ನ ಸ್ನೇಹಲೋಕ!

ಇಪ್ಪತ್ತು ವರ್ಷಗಳ ನಂತರ…..!

ಈಗ ಕಾಲ ಬದಲಾಗಿದೆ, ಮಕ್ಕಳು ಶಾಲೆಗೆ ಹೋಗಲು ಬೇಕಾದಷ್ಟು ಬಸ್ಸುಗಳಿವೆ, ಅದೇ ಶಾಲೆಗಳ ವಾಹನಗಳೂ ಇವೆ, ಆಟೋ ಇದೆ, ಮನೆ ಮನೆಗಳಲ್ಲೂ ಬೈಕು, ಕಾರುಗಳಿವೆ…. ಆದರೂ ಕೆಲವು ಹಿಂದುಳಿದ ಹಳ್ಳಿಗಳಲ್ಲಿ ಮಕ್ಕಳು ಸೌಲಭ್ಯ ವಂಚಿತರಾಗಿಯೇ ಇದ್ದಾರೆ.  ಅಂತಹ ಲಕ್ಷಾಂತರ ಮಕ್ಕಳಲ್ಲಿ ಹತ್ತಾರು ಮಕ್ಕಳಿಗಾದರೂ ನಮ್ಮ ಕೈಲಾದ ಸಹಾಯ ಮಾಡಬೇಕು ಅನ್ನುವ ಆಶಯದಿಂದ ರೂಪ ತಳೆದ ತಂಡವೇ ಹತ್ತು ಜನರಿಂದ ಒಂದೊಂದು ತುತ್ತು…..!

ಹತ್ತು ಜನರಿಂದ ಒಂದು ತುತ್ತು….. ಈ ಪರಿಕಲ್ಪನೆ ಹುಟ್ಟಿಕೊಂಡದ್ದೇ ವಿಸ್ಮಯ. ನಾನು ಚಿಕ್ಕಂದಿನಿಂದಲೂ ಕಟ್ಟಿದ ಕನಸು ಅದು. ಬಿರು ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆವಾಗ ಅಯ್ಯೋ  ದೇವರೇ  ಒಂದು ಜೊತೆ ಚಪ್ಪಲಿಯು ನನ್ನ ಬಳಿ ಇಲ್ಲವಲ್ಲಾ ಅಂದುಕೊಂಡು ಕಣ್ಣಲ್ಲಿ ನೀರಿಡುತ್ತಿದ್ದ ಕಾಲದಲ್ಲೇ ಮನದಲ್ಲೇ ಹುಟ್ಟಿಕೊಂಡ ಕಲ್ಪನೆ ಇದು. ಮುಂದೆ ಒಂದಲ್ಲ ಒಂದು ದಿನ ಹತ್ತಾರು ಜನರನ್ನು ಒಟ್ಟುಗೂಡಿಸಿ ಹತ್ತಾರು ಜನ ನನತೆಯೇ ಇರುವವರಿಗೆ ಸಹಾಯ ಮಾಡಬೇಕು ಅನ್ನುವ ಆಶಯ ಆಗಲೇ ಹುಟ್ಟಿಕೊಂಡಿತ್ತು.

ಉಳ್ಳವರಿಂದ ಪಡೆದು ಇಲ್ಲದವರಿಗೆ ಕೊಡಬೇಕುಸಮಾಜಕ್ಕೆ ನಮ್ಮದೇ ಏನಾದರೂ ಕೊಡುಗೆ ಕೊಡಬೇಕು ಎಂಬ ಆಶಯ ಚಿಕ್ಕ ವಯಸಿನ ಮನಸಲ್ಲಿ ಇದ್ದ ದೊಡ್ಡ ಆಸೆಗೆ ಇಂದು ಕಾಲ ಕೂಡಿ ಬಂದಿತು. 

ಆ ಕನಸುಗಳು ಕೈಗೂಡಲು ತೆಗೆದುಕೊಂಡ ಕಾಲ ಇಪ್ಪತ್ತು ವರ್ಷಗಳು.!

ನನ್ನ ಕಣ್ಣ ಸಣ್ಣ ಕನಸ ನನಸು ಮಾಡಲು ನಾ ಆಯ್ಕೆ ಮಾಡಿಕೊಂಡ ಸ್ಥಳವೇ ಸಾಮಾಜಿಕ ತಾಣಗಳು

ನಾನು 2008 ರಿಂದ ಸಾಮಾಜಿಕ ತಾಣಗಳಲ್ಲಿ ಇದ್ದರೂ ಯಾವುದೇ ತಂಡದ ಒಳಗೆ ಸೇರಿಕೊಂಡಿರಲಿಲ್ಲ……   ಅದು ಎರಡು ಸಾವಿರದ ಹತ್ತನೇ ಇಸವಿ ಆಗಸ್ಟ್ ತಿಂಗಳು ಆರ್ಕುಟ್ ಎಂಬ ಸಾಮಾಜಿಕ ತಾಣದಲ್ಲಿ ಸ್ನೇಹಲೋಕ ಎಂಬ ತಂಡದೊಳಗೆ ಹೊಕ್ಕು ಕಣ್ಣಾಡಿಸಿದೆ.

ಒಂದು ಹಂತದಲ್ಲಿ ಬದುಕು ಬೇಸರವಾಗಿ ಬದುಕು ಬೇಡ ಅಂದುಕೊಂಡಿದ್ದಾಗ ಕಣ್ಣಿಗೆ ಕಂಡದ್ದೇ ನಮ್ಮ ಸ್ನೇಹಲೋಕ, ಆ ತಂಡದ ಹುಡುಗರ ಸ್ನೇಹ , ಪ್ರೀತಿಆಶಯಗಳಿಗೆ ಮನಸೋತೆ, ಅಲ್ಲಿಂದ ಸ್ನೇಹಲೋಕ  ನನ್ನ ನಿತ್ಯ ಜೀವನದ  ಅವಿಭಾಜ್ಯ ಅಂಗವಾಗಿ  ಹೋಯಿತು ಆ ತಂಡದಲ್ಲಿನ ಸ್ನೇಹಿತರು ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳಲ್ಲಿ ನಾನೂ ತೊಡಗಿಕೊಂಡು ನನ್ನ ಚಿಕ್ಕ ವಯಸಿನ ಆಶಯವನ್ನು ನೆರವೇರಿಸುವಲ್ಲಿ ನಿರತನಾದೆ.  ಸ್ನೇಹಲೋಕ ಒಂದು ರೀತಿಯಲ್ಲಿ ನನಗೆ ಮರುಜನ್ಮ ಕೊಟ್ಟ ತಂ ಎಂದರೆ ತಪ್ಪಿಲ್ಲ. 

ಸ್ನೇಹಲೋಕ ಅಂದ ಕೂಡಲೇ ಹೊಸ ಹುರುಪು ಮೂಡುವಷ್ಟು ಹಿತವಾಗಿತ್ತುನಮ್ಮ ತಂಡ. ಜೀವಿತ ಅನಾಥಾಶ್ರಮ, ರಾಮನಗರದ ಹಿತೈಷಿ ಬಳಗ, ಮಲ್ಲಿಗೆರೆ ಸರ್ಕಾರಿ ಶಾಲೆಯ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸ್ನೇಹಲೋಕದ ಗೆಳಯರು  ನನಗೆ ಮತ್ತಷ್ಟು ಹತ್ತಿರವೆನಿಸತೊಡಗಿದರು ಒಂದು ಅರ್ಥದಲ್ಲಿ ನಾನು ಈ ರೀತಿ ಇರಬೇಕಾದರೆ ಅದಕ್ಕೆ ಮೂಲ ಕಾರಣವೇ ನನ್ನ ಸ್ನೇಹಲೋಕ……….. ತುಂಬು ಮನದ ವಂದನೆಗಳು ಸ್ನೇಹಲೋಕಾ……………

…………………ಮುಂದುವರೆಯುತ್ತದೆ

https://antarangadinda.wordpress.com/

ಹತ್ತು ಜನರಿಂದ ಒಂದೊಂದು ತುತ್ತು….. ಇದು ನನ್ನ ಬಾಲ್ಯದ ಕನಸು….

ಅದು ಸಾವಿರದಾ ಒಂಬೈನೂರ ತೊಂಬತ್ತೆರಡನೆ ಇಸವಿ (1992) ಅಂದರೆ ಸರಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ! ನಾನಾಗ ನಾಲ್ಕನೇ ತರಗತಿ ಓದುತ್ತಿದ್ದೆ ಮನೆಯಿಂದ ಶಾಲೆಗೆ 5 ಕಿ ಮೀ ಪಯಣ, ಈಗಿನಂತೆ ಬಸ್ಸಿರಲಿಲ್ಲಾ, ಆಟೋ ಇರಲಿಲ್ಲ, ಆಟೋ ಇದ್ದರೂ ಬಡವರ ಕೈಗೆಟುಕುವಂತಿರಲಿಲ್ಲ ಹಾಗೂ ಇತರೆ ವಾಹನವಿಲ್ಲ. ನಡೆದುಕೊಂಡೇ ಶಾಲೆಗೆ ಹೋಗಬೇಕು,  ನಡೆದುಕೊಂಡೆ ಮನೆಗೆ ವಾಪಸ್ ಬರಬೇಕು. ಅದೂ ಬರಿಗಾಲಿನಲ್ಲಿ! ಬಿಸಿಲುಗಾಲದಲ್ಲಿ ಪ್ರತಿ ಹೆಜ್ಜೆ ಇಡಬೇಕಾದರೆ ಕಣ್ಣು ತುಂಬಿ ಬರುತ್ತಿತ್ತು….

ಆ ದಿನಗಳಲ್ಲಿ ಒಂದು ದಿನ ಎಂದಿನ ಶನಿವಾರದಂತೆ ಅರ್ಧ ದಿನದ ತರಗತಿ ಮುಗಿಸಿಕೊಂಡು ಬಿರು ಬಿಸಿಲಿನಲ್ಲಿ ನಡೆದು ಸಾಗುವಾಗ ಅರ್ಧ ದಾರಿ ಕ್ರಮಿಸಲಷ್ಟೇ ಸಾಧ್ಯವಾದದ್ದು, ಕಾಲುಗಳು ಸುಟ್ಟು ಹೆಜ್ಜೆ ಇಡಲಾಗದೆ ಕ್ಷಣ ಕ್ಷಣಕ್ಕೂ ನರಕ ಯಾತನೆಯ ಅನುಭವಿಸಿದಂತಾಗುತಿತ್ತು ಹಾಗೂ ಹೀಗೂ ಮಾಡಿ ಮನೆ ಸೇರಿದ್ದು ಆಯಿತು……

ಆ ದಿನ ಹೆಜ್ಜೆ ಇಡಲಾಗದೆ ಸುಸ್ತಾಗಿ ಕುಳಿತಾಗ ಗಟ್ಟಿಯಾಗಿ ಮಾಡಿದ ಒಂದು ನಿರ್ಧಾರ ಅಂದರೆ ಸಾಧ್ಯವಾದರೆ ಮುಂದೊಂದು ದಿನ ನಾನು ದೊಡ್ಡವನಾದ ಮೇಲೆ ನನ್ನಂತೆ ಬರಿಗಾಲಲ್ಲಿ ನಡೆವ ಒಂದು ಮಗುವಿಗಾದರೂ ಚಪ್ಪಲಿ ಕೊಡಿಸಬೇಕು……….. ಅಲ್ಲಿಂದ ಅದು ಪ್ರತಿ ನಿತ್ಯದ ಕನಸೇ ಆಗಿ ಹೋಯಿತು ಆ ಕನಸಲ್ಲಿ ನನ್ನ ನೋವು ಮರೆತೇ ಹೋಗಿತ್ತು………..!!

ಬರೀ ಪಾದರಕ್ಷೆಯ ಸಮಸ್ಯೆ ಮಾತ್ರವಲ್ಲ ನಮ್ಮ ಬದುಕು ಅದನ್ನೂ ಮೀರಿದ ಹತ್ತು ಹಲವು ನೋವುಗಳಿದ್ದವು ಅವುಗಳಲ್ಲಿ ಕೆಲವು ಇಂದಿಗೂ ಮನದಲ್ಲಿ ಜೀವಂತ, ಇತರ ನಮಗಿಂತ ಸಿರಿವಂತರ ಮಕ್ಕಳು ಓದಿ ಬರೆದು ಮುಗಿಸಿದ ಪುಸ್ತಕದಲ್ಲಿ ಉಳಿದ ಹಾಳೆಗಳನ್ನು ಪಡೆದು ಅದನ್ನು ಒಟ್ಟುಗೂಡಿಸಿ ಅದಕ್ಕೆ ದಾರದಿಂದ ಹೊಲಿಗೆ ಹಾಕಿ ಪುಸ್ತಕದ ರೀತಿ ಮಾಡಿ ನೋಟ್ಸ್‌ಗಳನ್ನು ಪೂರ್ಣಗೊಳಿಸಿದ ಹತ್ತಾರು ಉದಾಹರಣೆಗಳು ಮನದಲ್ಲಿ ಹಚ್ಚ ಹಸಿರಾಗಿದ್ದು, ಇಂದಿಗೂ ಕಣ್ಣಲ್ಲಿ ನೀರು ತರಿಸುತ್ತವೆ.

ಹರಿದ ಅಂಗಿಯ ಉಟ್ಟು, ಕೊಳಕು ಚಡ್ಡಿಯ ತೊಟ್ಟು, ದಾರಿಯಲಿ ನಡೆವಾಗ ಹಣವಂತರ ಮಕ್ಕಳು ಅಣಕಿಸಿದ್ದು ಇನ್ನೂ ಹಸಿ ಹಸಿಯಾಗಿಯೇ ನೆನಪಿದೆ.
ಇದೆಲ್ಲಾ ನನ್ನ ಬದುಕಿನ ಪುಟಗಳಲಿ ಅಚ್ಚಳಿಯದೆ ಉಳಿದ ನೆನಪುಗಳ ಕಲಾಕೃತಿಗಳು ಅಂದರೂ ತಪ್ಪಲ್ಲ.

……………………………………………………………………………………………………………

ಇಪ್ಪತ್ತು ವರ್ಷಗಳ ನಂತರ…..!

…………………ಮುಂದುವರೆಯುತ್ತದೆ

ಈ ಕ್ಷಣದ ಅಂತರಂಗದ ಭಾವ ಇದು

ಯಾಕೋ ಗೊತ್ತಿಲ್ಲಾ ಇತ್ತೀಚೆಗೆ ಖಾಲಿ ಹಾಳೆ ಮೇಲೆ ಏನಾದರೂ ಗೀಚಬೇಕೆಂಬ ಖಯಾಲಿ ಹೆಚ್ಚಾಗಿದೆ, ಆದರೆ ಎಲ್ಲ್ಲೋ ಇದ್ದಾಗ ತೋಚುವ ಪದಗಳು ಗೀಚಲು ಕುಳಿತಾಗ ಆಚೆಗೆ ಬರುವುದೇ ಇಲ್ಲಾ…. ಎಲ್ಲಾ ನಮ್ಮ ಕರ್ಮಾ…. ನೆನಪಾದಾಗ ಬರೆದು ನಿಮ್ಮ ಮುಂದಿಡುತ್ತೇನೆ…… ವಂದನೆಗಳೊಂದಿಗೆ