ನನ್ನ ಬದುಕ ದಿಕ್ಕನ್ನು ಬದಲಿಸಿದ್ದು ನನ್ನ ಸ್ನೇಹಲೋಕ!

ಇಪ್ಪತ್ತು ವರ್ಷಗಳ ನಂತರ…..!

ಈಗ ಕಾಲ ಬದಲಾಗಿದೆ, ಮಕ್ಕಳು ಶಾಲೆಗೆ ಹೋಗಲು ಬೇಕಾದಷ್ಟು ಬಸ್ಸುಗಳಿವೆ, ಅದೇ ಶಾಲೆಗಳ ವಾಹನಗಳೂ ಇವೆ, ಆಟೋ ಇದೆ, ಮನೆ ಮನೆಗಳಲ್ಲೂ ಬೈಕು, ಕಾರುಗಳಿವೆ…. ಆದರೂ ಕೆಲವು ಹಿಂದುಳಿದ ಹಳ್ಳಿಗಳಲ್ಲಿ ಮಕ್ಕಳು ಸೌಲಭ್ಯ ವಂಚಿತರಾಗಿಯೇ ಇದ್ದಾರೆ.  ಅಂತಹ ಲಕ್ಷಾಂತರ ಮಕ್ಕಳಲ್ಲಿ ಹತ್ತಾರು ಮಕ್ಕಳಿಗಾದರೂ ನಮ್ಮ ಕೈಲಾದ ಸಹಾಯ ಮಾಡಬೇಕು ಅನ್ನುವ ಆಶಯದಿಂದ ರೂಪ ತಳೆದ ತಂಡವೇ ಹತ್ತು ಜನರಿಂದ ಒಂದೊಂದು ತುತ್ತು…..!

ಹತ್ತು ಜನರಿಂದ ಒಂದು ತುತ್ತು….. ಈ ಪರಿಕಲ್ಪನೆ ಹುಟ್ಟಿಕೊಂಡದ್ದೇ ವಿಸ್ಮಯ. ನಾನು ಚಿಕ್ಕಂದಿನಿಂದಲೂ ಕಟ್ಟಿದ ಕನಸು ಅದು. ಬಿರು ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆವಾಗ ಅಯ್ಯೋ  ದೇವರೇ  ಒಂದು ಜೊತೆ ಚಪ್ಪಲಿಯು ನನ್ನ ಬಳಿ ಇಲ್ಲವಲ್ಲಾ ಅಂದುಕೊಂಡು ಕಣ್ಣಲ್ಲಿ ನೀರಿಡುತ್ತಿದ್ದ ಕಾಲದಲ್ಲೇ ಮನದಲ್ಲೇ ಹುಟ್ಟಿಕೊಂಡ ಕಲ್ಪನೆ ಇದು. ಮುಂದೆ ಒಂದಲ್ಲ ಒಂದು ದಿನ ಹತ್ತಾರು ಜನರನ್ನು ಒಟ್ಟುಗೂಡಿಸಿ ಹತ್ತಾರು ಜನ ನನತೆಯೇ ಇರುವವರಿಗೆ ಸಹಾಯ ಮಾಡಬೇಕು ಅನ್ನುವ ಆಶಯ ಆಗಲೇ ಹುಟ್ಟಿಕೊಂಡಿತ್ತು.

ಉಳ್ಳವರಿಂದ ಪಡೆದು ಇಲ್ಲದವರಿಗೆ ಕೊಡಬೇಕುಸಮಾಜಕ್ಕೆ ನಮ್ಮದೇ ಏನಾದರೂ ಕೊಡುಗೆ ಕೊಡಬೇಕು ಎಂಬ ಆಶಯ ಚಿಕ್ಕ ವಯಸಿನ ಮನಸಲ್ಲಿ ಇದ್ದ ದೊಡ್ಡ ಆಸೆಗೆ ಇಂದು ಕಾಲ ಕೂಡಿ ಬಂದಿತು. 

ಆ ಕನಸುಗಳು ಕೈಗೂಡಲು ತೆಗೆದುಕೊಂಡ ಕಾಲ ಇಪ್ಪತ್ತು ವರ್ಷಗಳು.!

ನನ್ನ ಕಣ್ಣ ಸಣ್ಣ ಕನಸ ನನಸು ಮಾಡಲು ನಾ ಆಯ್ಕೆ ಮಾಡಿಕೊಂಡ ಸ್ಥಳವೇ ಸಾಮಾಜಿಕ ತಾಣಗಳು

ನಾನು 2008 ರಿಂದ ಸಾಮಾಜಿಕ ತಾಣಗಳಲ್ಲಿ ಇದ್ದರೂ ಯಾವುದೇ ತಂಡದ ಒಳಗೆ ಸೇರಿಕೊಂಡಿರಲಿಲ್ಲ……   ಅದು ಎರಡು ಸಾವಿರದ ಹತ್ತನೇ ಇಸವಿ ಆಗಸ್ಟ್ ತಿಂಗಳು ಆರ್ಕುಟ್ ಎಂಬ ಸಾಮಾಜಿಕ ತಾಣದಲ್ಲಿ ಸ್ನೇಹಲೋಕ ಎಂಬ ತಂಡದೊಳಗೆ ಹೊಕ್ಕು ಕಣ್ಣಾಡಿಸಿದೆ.

ಒಂದು ಹಂತದಲ್ಲಿ ಬದುಕು ಬೇಸರವಾಗಿ ಬದುಕು ಬೇಡ ಅಂದುಕೊಂಡಿದ್ದಾಗ ಕಣ್ಣಿಗೆ ಕಂಡದ್ದೇ ನಮ್ಮ ಸ್ನೇಹಲೋಕ, ಆ ತಂಡದ ಹುಡುಗರ ಸ್ನೇಹ , ಪ್ರೀತಿಆಶಯಗಳಿಗೆ ಮನಸೋತೆ, ಅಲ್ಲಿಂದ ಸ್ನೇಹಲೋಕ  ನನ್ನ ನಿತ್ಯ ಜೀವನದ  ಅವಿಭಾಜ್ಯ ಅಂಗವಾಗಿ  ಹೋಯಿತು ಆ ತಂಡದಲ್ಲಿನ ಸ್ನೇಹಿತರು ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳಲ್ಲಿ ನಾನೂ ತೊಡಗಿಕೊಂಡು ನನ್ನ ಚಿಕ್ಕ ವಯಸಿನ ಆಶಯವನ್ನು ನೆರವೇರಿಸುವಲ್ಲಿ ನಿರತನಾದೆ.  ಸ್ನೇಹಲೋಕ ಒಂದು ರೀತಿಯಲ್ಲಿ ನನಗೆ ಮರುಜನ್ಮ ಕೊಟ್ಟ ತಂ ಎಂದರೆ ತಪ್ಪಿಲ್ಲ. 

ಸ್ನೇಹಲೋಕ ಅಂದ ಕೂಡಲೇ ಹೊಸ ಹುರುಪು ಮೂಡುವಷ್ಟು ಹಿತವಾಗಿತ್ತುನಮ್ಮ ತಂಡ. ಜೀವಿತ ಅನಾಥಾಶ್ರಮ, ರಾಮನಗರದ ಹಿತೈಷಿ ಬಳಗ, ಮಲ್ಲಿಗೆರೆ ಸರ್ಕಾರಿ ಶಾಲೆಯ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸ್ನೇಹಲೋಕದ ಗೆಳಯರು  ನನಗೆ ಮತ್ತಷ್ಟು ಹತ್ತಿರವೆನಿಸತೊಡಗಿದರು ಒಂದು ಅರ್ಥದಲ್ಲಿ ನಾನು ಈ ರೀತಿ ಇರಬೇಕಾದರೆ ಅದಕ್ಕೆ ಮೂಲ ಕಾರಣವೇ ನನ್ನ ಸ್ನೇಹಲೋಕ……….. ತುಂಬು ಮನದ ವಂದನೆಗಳು ಸ್ನೇಹಲೋಕಾ……………

…………………ಮುಂದುವರೆಯುತ್ತದೆ

https://antarangadinda.wordpress.com/

Advertisements